ಕಾಮನ್ಸ್: ವಿಕಿ ಲವ್ಸ್ ಫೋಕ್ಲೋರ್ ೨೦೨೩

From Wikimedia Commons, the free media repository
Jump to navigation Jump to search
This page is a translated version of a page Commons:Wiki Loves Folklore 2023 and the translation is 96% complete. Changes to the translation template, respectively the source language can be submitted through Commons:Wiki Loves Folklore 2023 and have to be approved by a translation administrator.
Outdated translations are marked like this.

Shortcut: COM:WLF23

  • Home Page
  • 2024
  • 2023
  • 2022
  • 2021
  • 2020
  • 2019


Welcome to Wiki Loves Folklore!

Wiki Folklore on website Wiki Folklore on Facebook {{{Threads}}} Wiki Folklore on Twitter Wiki Folklore on Instagram Wiki Folklore on Telegram Wiki Folklore on YouTube Wiki Folklore via mailing list

The results for Wiki Loves Folklore 2023 International competition have been declared. Please visit the Results page to see the winning media.
ವಿಕಿ ಜಾನಪದವನ್ನು ಪ್ರೀತಿಸುತ್ತದೆ

ವಿಕಿ ಲವ್ಸ್ ಫೋಕ್ಲೋರ್ (Meta-Wiki: Wiki Loves Folklore) ಎಂಬುದು ಪ್ರಪಂಚದ ವಿವಿಧ ಪ್ರದೇಶಗಳಲ್ಲಿನ ಜಾನಪದ ಸಂಸ್ಕೃತಿಗಳನ್ನು ವಿಕಿಮೀಡಿಯಾ ಕಾಮನ್ಸ್‌ನಲ್ಲಿ ದಾಖಲಿಸುವ ಸಲುವಾಗಿ ಪ್ರತಿವರ್ಷದಂತೆ ಆಯೋಜಿಸಲಾದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಾಗಿದೆ. ವಿಕಿ ಲವ್ಸ್ ಫೋಕ್ಲೋರ್ 2022 ರ ಮುಂದುವರಿದ ಭಾಗವಾದ ವಿಕಿ ಲವ್ಸ್ ಫೋಕ್ಲೋರ್ ೨೦೨೩ ರ ವಿಷಯ ಜಾನಪದ ಸಂಸ್ಕೃತಿಯಾಗಿದೆ. ಮೊಟ್ಟ ಮೊದಲು ಈ ಯೋಜನೆಯು 2018 ರಲ್ಲಿ Wiki Loves Love 2019 ನಿಂದ ಆಚರಣೆಗಳು ಮತ್ತು ಪ್ರೀತಿಯ ಹಬ್ಬಗಳು ಎಂಬ ವಿಷಯದ ಕುರಿತು ಪ್ರಾರಂಭವಾಯಿತು.

ಧ್ಯೇಯ/ಉದ್ದೇಶ

ಈ ಛಾಯಾಗ್ರಹಣ ಸ್ಪರ್ಧೆಯು ವಿವಿಧ ಪ್ರದೇಶಗಳ ಜಾನಪದ ಸಂಸ್ಕೃತಿಗಳಾದ ಜಾನಪದ ಉತ್ಸವಗಳು, ಜಾನಪದ ನೃತ್ಯಗಳು, ಜಾನಪದ ಸಂಗೀತ, ಜಾನಪದ ಚಟುವಟಿಕೆಗಳು, ಜಾನಪದ ಆಟಗಳು, ಜಾನಪದ ಪಾಕಪದ್ಧತಿ, ಜಾನಪದ ಉಡುಗೆ, ಜಾನಪದ ಮತ್ತು ಸಂಪ್ರದಾಯ , ಲಾವಣಿಗಳು, ಜಾನಪದ ಕಥೆಗಳು, ಕಾಲ್ಪನಿಕ ಕಥೆಗಳು, ದಂತಕಥೆಗಳು, ಸಾಂಪ್ರದಾಯಿಕ ಹಾಡು ಮತ್ತು ನೃತ್ಯ, ಜಾನಪದ ನಾಟಕಗಳು, ಆಟಗಳು, ಕಾಲೋಚಿತ ಘಟನೆಗಳು, ಕ್ಯಾಲೆಂಡರ್ ಪದ್ಧತಿಗಳು, ಜಾನಪದ ಕಲೆಗಳು, ಜಾನಪದ ಧರ್ಮ, ಪುರಾಣಗಳ ಮೇಲೆ ಕೇಂದ್ರೀಕೃತವಾಗಿದೆ. ಇವುಗಳಿಗೆ ಮಾತ್ರ ಸೀಮಿತವಾಗಿರದೆ ಇತರ ಕೆಲವು ಸಲಹೆಗಳು ಮತ್ತು ಉದಾಹರಣೆಗಳನ್ನು ನಮ್ಮ Category ಪುಟದಲ್ಲಿ ಪರಿಶೀಲಿಸಬಹುದು.

ವಿಷಯ

ಜಾನಪದ
ಉಪವರ್ಗಗಳು ದೇಶವಾರು ಜಾನಪದ ಸಂಸ್ಕೃತಿ, ಜಾನಪದ ಕಲೆ, ಚೀನೀ ಭವಿಷ್ಯ ಹೇಳುವುದು, ಜಾನಪದ ನೃತ್ಯ, ಯುರೋಪೆಡ್, ಜಾನಪದ ಉತ್ಸವ/ಹಬ್ಬಗಳು, ಜಾನಪದ, ಜಾನಪದ ಆಟಗಳು, ಗವಾರಿ, ಜಾನಪದ ಗುಂಪುಗಳು, ಜಾನಪದ ಜಾದೂ, ಜಾನಪದ ವಸ್ತುಸಂಗ್ರಹಾಲಯಗಳು, ಜಾನಪದ ಸಂಗೀತ, ನ್ಯೂವೆಲ್ಲಿಂಗ್, ಜಾನಪದ ಧರ್ಮ, ಸಾಂಪ್ರದಾಯಿಕ ಸಂಗೀತ, ಸಾಂಪ್ರದಾಯಿಕ ಹಾಡುಗಳು, ಜಾನಪದ ಕುಸ್ತಿ.


ಬಹುಮಾನಗಳು

೧ನೇ ಬಹುಮಾನ:' ೫00 USD

೨ನೇ ಬಹುಮಾನ: ೪00 USD

೩ನೇ ಬಹುಮಾನ: ೩00 USD

10 ಅತ್ಯುತ್ತಮ ಸಮಾಧಾನಕರ ಬಹುಮಾನಗಳು: ತಲಾ ೪0 USD

ಅತ್ಯುತ್ತಮ ವಿಡಿಯೋ ಬಹುಮಾನ ಮತ್ತು ಅತ್ಯುತ್ತಮ ಆಡಿಯೋ ಬಹುಮಾನ: ೧೫0 USD & ೧೫0 USD

ಚಿತ್ರಗಳಿಗೆ ಟಾಪ್ ಅಪ್‌ಲೋಡರ್ ಬಹುಮಾನ: ಪ್ರಥಮ ಬಹುಮಾನ: ೧00 USD, ದ್ವಿತೀಯ ಬಹುಮಾನ: ೫0 USD

ಅತ್ಯುತ್ತಮ ೧00 ಅಪ್‌ಲೋಡರ್‌ಗಳಿಗೆ ವಿಕಿ ಲವ್ಸ್ ಫೋಕ್ಲೋರ್ ಪೋಸ್ಟ್‌ಕಾರ್ಡ್‌ಗಳು

ಸ್ಥಳೀಯ ಸಂಘಟಕರಿಗೆ ಪ್ರಮಾಣಪತ್ರಗಳು ಮತ್ತು ಪೋಸ್ಟ್‌ಕಾರ್ಡ್‌ಗಳು.

(ಬಹುಮಾನಗಳನ್ನು ಗಿಫ್ಟ್ ಕಾರ್ಡ್ ಅಥವಾ ವೋಚರ್ ಸ್ವರೂಪದಲ್ಲಿ ವಿತರಿಸಲಾಗುತ್ತದೆ.)

ಕಾಲಮಿತಿ

WLF 2023 ರ ಕಾಲಮಿತಿ ಈ ಕೆಳಗಿನಂತಿದೆ

  • ಫೆಬ್ರವರಿ 1 - 31 ಮಾರ್ಚ್, 2023
  • ಸಲ್ಲಿಕೆ ಪ್ರಾರಂಭ: ಫೆಬ್ರವರಿ 1, 2023 00:01 (UTC)
  • ಸಲ್ಲಿಕೆಗಳಿಗೆ ಅಂತಿಮ ದಿನಾಂಕ: ಮಾರ್ಚ್ 31, 2023 23:59 (UTC)
  • ಫಲಿತಾಂಶಗಳ ಘೋಷಣೆ: ಘೋಷಿಸಲಾಗುವುದು (ಗಮನಿಸಿ: ಫಲಿತಾಂಶ ಘೋಷಣೆಯು ಬದಲಾವಣೆಗಳಿಗೆ ಒಳಪಟ್ಟಿರುತ್ತದೆ ಮತ್ತು ಸಾಂಕ್ರಾಮಿಕ ರೋಗವಿರುವ ಸಂದರ್ಭಗಳಿಗೆ ಒಳಪಟ್ಟು ವಿಳಂಬವಾಗಬಹುದು.)

ಸ್ವೀಕರಿಸಲು ಅನರ್ಹವಾದ ವಿಷಯಗಳು

ನಾವು ಇವುಗಳನ್ನು ಸ್ವೀಕರಿಸುವುದಿಲ್ಲ:

  • ಕಾಮನ್ಸ್ ಪ್ರಾಜೆಕ್ಟ್ ವ್ಯಾಪ್ತಿಯಿಂದ ಹೊರಗಿನವುಗಳನ್ನು.
  • ಎಕ್ಸಿಫ್ (EXIF) ಮಾಹಿತಿಯ ಕೊರತೆಯಿರುವವುಗಳನ್ನು.
  • ಅತಿಯಾಗಿ ಸಂಸ್ಕರಿಸಿದ ಮತ್ತು ಡಿಜಿಟಲ್ ಮೂಲಕ ಬದಲಾಯಿಸಿದ ಮಾಧ್ಯಮಗಳು.
  • ಅಶ್ಲೀಲ ಚಿತ್ರಗಳು.
  • ಕೃತಿಸ್ವಾಮ್ಯ ಸಮಸ್ಯೆಗಳಿಂದ ಕೂಡಿದ ಕಲಾಕೃತಿ, ಇತ್ಯಾದಿ.

ನಮ್ಮನ್ನು ಸಂಪರ್ಕಿಸಿ

ಹಲವು ರೀತಿಯಲ್ಲಿ ನಮ್ಮನ್ನು ಸಂಪರ್ಕಿಸಬಹುದು:

ಕಳುಹಿಸಬಹುದಾದ ಫೋಟೋಗಳಿಗೆ ಉದಾಹರಣೆಗಳು

ಜಾನಪದ ಜನರು ಮತ್ತು ಚಟುವಟಿಕೆಗಳು

ಜಾನಪದ ಪಾಕಪದ್ಧತಿ

ಜಾನಪದ ನೃತ್ಯಗಳು

ಜಾನಪದ ಹಬ್ಬಗಳು

ಜಾನಪದ ಸಂಗೀತ

ಜಾನಪದ ವೇಷಭೂಷಣಗಳು/ಉಡುಪು


ಬರವಣಿಗೆ ಸ್ಪರ್ಧೆ
1ನೇ ಫೆಬ್ರವರಿ 2023 ರಿಂದ 31 ಮಾರ್ಚ್ 2023 ರವರೆಗೆ ಸ್ತ್ರೀವಾದ ಮತ್ತು ಜಾನಪದ 2023 ಎಂಬ ಬರವಣಿಗೆ ಸ್ಪರ್ಧೆಯಿದೆ. ವಿಕಿಪೀಡಿಯಾದಲ್ಲಿ ಜಾನಪದ ಸಂಸ್ಕೃತಿ ವಿಷಯ ಹಿನ್ನಲೆಯುಳ್ಳ ವಿಕಿ ಲವ್ಸ್ ಫೋಕ್ಲೋರ್ ನ ಲಿಂಗ ತಾರತಮ್ಯ ಕೇಂದ್ರಿತ ಯೋಜನೆಯ ಭಾಗವಾಗಿ ಸ್ತ್ರೀವಾದ, ಮಹಿಳಾ ಜೀವನಚರಿತ್ರೆ ಮತ್ತು ಲಿಂಗ-ಕೇಂದ್ರಿತ ವಿಷಯಗಳ ಕುರಿತು ಲೇಖನಗಳನ್ನು ರಚಿಸಿ ಅಥವಾ ವಿಸ್ತರಿಸಿ. ಈಗ ನಿಮ್ಮ ಸ್ಥಳೀಯ ಭಾಷೆಯಲ್ಲಿ.ಭಾಗವಹಿಸಿ.