User talk:Prasad Srivathsa

From Wikimedia Commons, the free media repository
Jump to navigation Jump to search
Welcome to Wikimedia Commons, Prasad Srivathsa!

-- Wikimedia Commons Welcome (talk) 14:25, 3 December 2021 (UTC)[reply]

ಮಾತು ಮತ್ತು ಮೌನ

[edit]
ಜಗತ್ತು ನಿಜಕ್ಕೂ ಅದ್ಭುತ. ಕಲಿಯಲು, ಕಲಿಸಲು ಇರುವ ಒಂದು ಸುಂದರವಾದ ಗರಡಿ. ಈ ಗರಡಿಯಲ್ಲಿ ಪೈಲ್ವಾನರಾಗಲು ಬರುವ ಅದೆಷ್ಟೋ ಮಂದಿಯಲ್ಲಿ ನಾನು ಕೂಡಾ ಒಬ್ಬ. ಈ ಟಾಸ್ಕ್ ಮಾಸ್ಟರ್ ನ ಕೈ ಸಿಕ್ಕು ವಿಗ್ರಹವಾಗ ಹೊರಟಿರುವ ನಾನು, ಕಲ್ಲೋ, ಮಣ್ಣೋ, ಲೋಹವೋ ಗೊತ್ತಿಲ್ಲ.  ಅದರ ರೂಪ ಹೇಗಾಗುತ್ತದೆ ಎಂಬುದೂ ಸಹಾ ನನಗೆ ತಿಳಿಯದು. ಆದರೂ ಕುತೂಹಲ ನನ್ನ ಹೆಗಲು ಹತ್ತಿದಾಗ ಅಲ್ಲಿ ಇಲ್ಲಿ ತಿರುಗಾಡಿ ಫಕೀರನ ಹಾಗೆ ಓಡಾಡಿ ಅನುಭವಗಳನ್ನು ಪಡೆಯುತ್ತಾ, ಅದನ್ನು ಕೆಲವರ ಬಳಿ ಹೇಳಿ ಹುಚ್ಚನೆನಿಸಿಕೊಂಡು, ಅಲೆದಾಡುತ್ತಾ

" ನಿನಗೇನಾಗಿದೆಯೋ ಧಾಡಿ ಗಡವನ ಹಾಗಿದ್ದೀಯಾ.ಏನಾದ್ರೂ ಕೆಲಸ ಮಾಡಿ ನಿಮ್ಮಪ್ಪ ಅಮ್ಮನನ್ನ ಸಾಕ ಬಾರದೇ...?" ಎಂದು ಹಿತೈಷಿಗಳ ಬಿರುನುಡಿಯನ್ನು ಕೇಳಿ, ಯಾವುದೋ ಸಾಧನೆಯನ್ನು ಮಾಡಬೇಕು ಎಂದು ಹೊರಟು ಸಾಧಿಸಲಾಗದೇ ಹಲವು ಬಾರಿ ವಿಫಲನಾಗಿ, ವಿಧಿಯೊಟ್ಟಿಗೆ ಚಾಲೆಂಜ್ ಮಾಡಿದ ಮಹಾ ಧೀರ.

                    ಅದೆಷ್ಟೋ ಅಸಂಖ್ಯಾತ ಓದುಗರೊಟ್ಟಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಸಿಗದೇ ಹೋದಾಗ ಈ ಪ್ರತಿಲಿಪಿಯಲ್ಲಿ ಬರೆಯುವ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ನನ್ನ ಬರವಣಿಗೆ ನನ್ನ ಜೀವನದ ಈ ಪಯಣದ ಕೆಲ ಕಹಿ ಕೆಲ ಸಿಹಿ ಅನುಭವಗಳನ್ನು ಧಾರಾವಾಹಿಯ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.

ಪ್ರಸಾದ್ ಶ್ರೀವತ್ಸ