File:Basavakalyan Gavimath.jpg

From Wikimedia Commons, the free media repository
Jump to navigation Jump to search

Original file(4,608 × 3,456 pixels, file size: 5 MB, MIME type: image/jpeg)

Captions

Captions

Add a one-line explanation of what this file represents

Summary

[edit]
Description
English: ಶ್ರೀ ರುದ್ರಮುನಿ ಶಿವಯೋಗಿಗಳು ಬಸವಕಲ್ಯಾಣ
Date
Source

ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ)ದಲ್ಲಿ ಆಳಿ ಹೋದ ಸಂಸ್ಥಾನಗಳ ಅವಶೇಷಗಳನ್ನೊಳಗೊಂಡ ವಸ್ತುಸಂಗ್ರಹಾಲಯ 'ಬಸವಕಲ್ಯಾಣ'ದಲ್ಲಿದೆ. ಬಸವಕಲ್ಯಾಣ ಬೀದರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಬೀದರದಿಂದ ೮೫.ಕಿ.ಮಿ. ದೂರದಲ್ಲಿದ್ದು ಗುಲಬರ್ಗಾದಿಂದ ಉತ್ತರಕ್ಕೆ ೬೫.ಕಿ.ಮೀ. ದೂರದಲ್ಲಿ ಪೂರ್ವ-ಪಶ್ಚಿಮಕ್ಕೆ ೬೫ನೇ ರಾಷ್ಟ್ರೀಯ ಹೆದ್ದಾರಿ ಬರುತ್ತದೆ.

ಇಲ್ಲಿಂದ ಪಶ್ಚಿಮದಲ್ಲಿದ್ದ ಸಸ್ತಾಪೂರ ಬಂಗ್ಲಾ ಎಂಬ ಗ್ರಾಮದಿಂದ ಉತ್ತರಕ್ಕೆ ೩ ಕಿ.ಮಿ. ಒಳಗೆ ಬಂದರೆ, ರಸ್ತೆ ಬಲಭಾಗಕ್ಕೆ ಬೃಹತ ಆಕಾರದ ಬಸವಣ್ಣ ಕುಳಿತಿರುವ ೧೦೮ ಅಡಿ. ಇರುವ ಮೂರ್ತಿ ಕಾಣುತ್ತದೆ. ಎಡಭಾಗದ ಅಂದರೆ ಪಶ್ಚಿಮದಕಡೆ ಇರುವ ರಸ್ತೆ ಮುಖಾಂತರ ಬಂದರೆ ಎತ್ತರದ ಬೆಟ್ಟ ಏರಿ ಹಾಗೇ ಸ್ವಲ್ಪ ಬೆಟ್ಟದ ಇಳಿಜಾರಿನಲ್ಲಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ, ಇರುವುದು. ಇದು ಬಸವಕಲ್ಯಾಣ ತಾಲೂಕಿನಲ್ಲಿ ಬರುವುದು.

ಈಗ ಈ ಗ್ರಾಮ ಬೆಳೆದು ತಾಲೂಕಿನೊಳಗೆ ಸೇರಿಕೊಂಡಿದೆ.ಈ ಪ್ರದೇಶಕ್ಕೆ 'ಹೈದ್ರಾಬಾದ ಕರ್ನಾಟಕ' ಎಂದು ಕರೆಯುತ್ತಿದ್ದರು. ಈ ಭಾಗಕ್ಕೆ 'ಕಲ್ಯಾಣ ಕರ್ನಾಟಕ' ಕರೆಯಬೇಕೆಂದು ಎಷ್ಟೋ ವರ್ಷಗಳ ಕಾಲ ಹೋರಾಡುವ ಹಲವಾರು ಮಹನಿಯರ ಒತ್ತಾಸೆಯದಮೇರೆಗೆ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಗಳನಾಗಿ ಇದ್ದಾಗ ೨೦೧೯ ಸೆಪ್ಟೆಂಬರ್ ೧೭ರಂದು ಈ ಪ್ರದೇಶಕ್ಕೆ “ಕಲ್ಯಾಣ ಕರ್ನಾಟಕ'ವೆಂದು ಕರೆಯಬೇಕೆಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಅಂದಿನಿಂದ 'ಹೈದ್ರಾಬಾದ ಕರ್ನಾಟಕ' ಬದಲಾಗಿ 'ಕಲ್ಯಾಣ ಕರ್ನಾಟಕ' ಎಂದು ಕರೆಯತೊಡಗಿದರು.ಶರಣರ ಸ್ಮಾರಕಗಳು ಇರುವವು. ಕೆಲವು ಶಿಲ್ಪಕಲೆಗಳು ಮತ್ತು ವಿವಿಧ ಬಗೆಯ ವಸ್ತುಗಳು ಬಸವಕಲ್ಯಾಣ ವಸ್ತು ಸಂಗ್ರಹಾಲಯದಲ್ಲಿ ತಂದಿಡಲಾಗಿದೆ. ಇಡೀ ಬಸವಕಲ್ಯಾಣ ಹಾಗೂ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಶಿವಶರಣರ ಸ್ಮಾರಕಗಳಿವೆ. ಅವುಗಳಲ್ಲಿನ ಒಂದನ್ನು ಸ್ಮಾರಕ ಆಯ್ದುಕೊಂಡು ಪರಿಚೆಯಸಿದ್ದೇನೆ. ಅದುವೇ “ಶ್ರೀ ಗುರು ಘನಲಿಂಗ ರುದ್ರಮುನಿ ಗವಿಮಠ, ಬಸವಕಲ್ಯಾಣ

ಘನಲಿಂಗ ರುದ್ರಮುನಿ ಮೂರ್ತಿ ಮೇಲೆ ಸೂರ್ಯನ ಕಿರಣಗಳು ಬೀಳುವ ಹೊನಲು ಬೆಳಕಿನಾರುತಿ. ಈ ವಿಸ್ಮಯಕಾರಿ ಅಪರೂಪದ ದೃಶ್ಯˌ ವರ್ಷದಲ್ಲಿ ಎರಡು ಸಲ ನವರಾತ್ರಿ ಮತ್ತು ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಕಾಣಸಿಗುವುದು. ಇಂತಹದೊಂದು ಅದ್ಭುತ ದೃಶ್ಯˌ ಇಂದು ಬೆಳಗ್ಗೆ ನನ್ನ ಕ್ಯಾಮರಾ ಕಣ್ಣಿಗೆ ಸಿಕ್ಕದ್ದು ನನ್ನ ಭಾಗ್ಯ ಸದ್ಭಕ್ತರು ಈ ಚಿತ್ರ ನೋಡಿ ಕಣ್ತುಂಬಿಸಿಕೊಂಡು ತೃಪ್ತಿ ಪಟ್ಟರೆˌ ಸೂರ್ಯ ಉದಯ ಆಗುವದಕ್ಕಿಂತ ಮುಂಚೆ ಸತತವಾಗಿ ಮೂರು ದಿನ ಬೆಳಗ್ಗೆ ಬೇಗ ಎದ್ದು ಹೋಗಿ ಕುಳಿತು ಫೋಟೊ ತೆಗೆದಕ್ಕೂ ಸಾರ್ಥಕ ಹಾಗೂ ನನಗೆ ಖುಷಿ ಕೊಡುತ್ತದೆ ಪ್ರತಿ ದಿನ ಒಂದೇ ಸ್ಥಳದಲ್ಲಿ ಬೇರೆ ಬೇರೆಯಾಗಿ ಸೂರ್ಯನ ಕಿರಣಗಳು ವಿಭಿನ್ನವಾಗಿ ಭಾವದಲೆಗಳು ಆಟ ಆಡುವವು ಎಂದು ನನಗರ್ಥವಾದದ್ದು. ಈ ಸುಂದರ ದೃಶ್ಯ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತ ಗ್ರಾಮದˌ 12ನೇ ಶತಮಾನದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠ. ಕವಿˌ ಕಲಾವಿದˌ ಛಾಯಾಗ್ರಾಹಕˌ

ವೀರಶೆಟ್ಟಿ ಎಂ.ಪಾಟೀಲ
Author Balajijagadesh Edit this at Structured Data on Commons


Camera location17° 51′ 09.9″ N, 76° 56′ 11.21″ E Kartographer map based on OpenStreetMap.View this and other nearby images on: OpenStreetMapinfo

Licensing

[edit]
I, the copyright holder of this work, hereby publish it under the following license:
w:en:Creative Commons
attribution share alike
This file is licensed under the Creative Commons Attribution-Share Alike 4.0 International license.
You are free:
  • to share – to copy, distribute and transmit the work
  • to remix – to adapt the work
Under the following conditions:
  • attribution – You must give appropriate credit, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use.
  • share alike – If you remix, transform, or build upon the material, you must distribute your contributions under the same or compatible license as the original.

File history

Click on a date/time to view the file as it appeared at that time.

Date/TimeThumbnailDimensionsUserComment
current06:20, 12 February 2019Thumbnail for version as of 06:20, 12 February 20194,608 × 3,456 (5 MB)Balajijagadesh (talk | contribs)User created page with UploadWizard

There are no pages that use this file.

Metadata